Friday, June 15, 2007

ಆವರಣ

ಆವರಣ ಬಿಡುಗಡೆಯಾದ್ಮೇಲೆ ನಾನು ಭೈರಪ್ಪನವರ ಪರಮ ಭಕ್ತಳು ಅಂತ ಗೊತ್ತಿದ್ದ ಸ್ನೇಹಿತರೆಲ್ಲ ಕೇಳ್ತಾ ಇದ್ರು ’ಆವರಣ ಓದಿದ್ಯಾ,ಹೇಗನ್ನಿಸ್ತು?’ ಅಂತ. ಆದ್ರೆ ನಾನು ಆವರಣ ಓದಿದ್ದು ಕಳೆದ ವಾರ ಅಷ್ಟೇ. ನಾನು ಪುಸ್ತಕ ಓದುವ ಹೊತ್ತಿಗೆ ಅದರ ವಿಮರ್ಶೆ-ಗಿಮರ್ಶೆ, ಕಾದಂಬರಿ ಅಲ್ಲ -ಬರೀ ಚರ್ಚೆ, URA ಹಾರಾಟ, ಹೊಡೆದಾಟ-ಬಡಿದಾಟ, ಪರ-ವಿರುದ್ಧ.. ಎಲ್ಲ ಆಗಿ ವಾತಾವರಣ ಸ್ವಲ್ಪ ತಣ್ಣಗಾಗಿತ್ತು. ನಾನು ಥೇಟ್ SLBಯವರ ಹಾಗೇ ಸುಮ್ನೇ ಇದನ್ನೆಲ್ಲಾ ನೋಡ್ತಾ, ಗಲಾಟೆಯನ್ನು ಎಂಜಾಯ್ ಮಾಡ್ಕೊಂಡು.. ಆಮೇಲೆ ಬುಕ್ ಎತ್ಕೊಂಡೆ - ಸುರಿಯುತ್ತಿರುವ ಮಳೆಯನ್ನು ಕಿಟಕಿಯಿಂದ ಕಾಫಿ ಕುಡ್ಕೊಂಡು ಆರಾಮಾಗಿ ನೋಡಿ, ಮಳೆ ನಿಂತಮೇಲೆ ತಣ್ಣಗೆ ಒಂದು ವಾಕ್ ಹೋದ ಹಾಗೆ.

ಪುಸ್ತಕ ಇಷ್ಟ ಆಯ್ತಾ ಅಂತ ಕೇಳ್ಬೇಡಿ, ಮೊದ್ಲೇ ಹೇಳಿದೆ ನಾನು SLB ಕಟ್ಟಾ ಅಭಿಮಾನಿ ಅಂತ. ಆವರಣ ಅವರ ಬೇರೆ ಕಾದಂಬರಿಗಳ ಹಾಗಿಲ್ಲ, ನಿಜ. ’ಆವರಣದ ಉದ್ದೇಶ ರಂಜನೆ ಅಲ್ಲ, ಸತ್ಯಾನ್ವೇಷಣೆ’ ಅಂತ ಅವರೇ ಹೇಳಿದ್ದಾರೆ. ಉದ್ದೇಶ ಏನೇ ಇರಲಿ, ಜನ ಇಷ್ಟಪಟ್ಟಿದ್ದಾರೆ, ಪುಸ್ತಕ ಮರುಮುದ್ರಣದ ಮೇಲೆ ಮರುಮುದ್ರಣ ಕಾಣುತ್ತಿದೆ.

ರಂಜನೆಯ ಅಂಶ ಕಡಿಮೆ ಅಂತ ಬೇಜಾರು ಮಾಡ್ಬೇಕಾಗಿಲ್ಲ - ಜನಗಳಿಗೆ ಬೇಕಾದಷ್ಟು ರಂಜನೆ URA ಕೊಟ್ಟಿದ್ದಾರೆ! Thank you Mr.ಜ್ಞಾನಪೀಠಿ..

2 comments:

Anonymous said...

Hi Shrilatha,
When are you back from oman(?).

maLe ninta mele walk hoguva nimma comparison chennagide..

Regards,
Vasanth Kaje
(Vasnatha.keshava@gmail.com)

Smitha T T said...

Hi Shri,
Neeve SLB book odohage maadiddu. Avra kelavondu book ishta aglilla.
Adre Vamsha Vriksha tumba ishta agittu. Nanu Avarana book tagomdu odiddu "male bamdu nitta mele". end swalpa urgent agi mugisdru anustu. bitre good book.
smitha