ತೇಜಸ್ಸು ಅನವರತ ಜೀವಂತ
"ಕುವೆಂಪು ಅವರ ಅತ್ಯುತ್ತಮ ಕೃತಿ ಯಾವುದು?" ಅಂತ ಖ್ಯಾತ ಸಾಹಿತಿಯೊಬ್ಬರನ್ನು ಕೇಳಿದಾಗ "ಪೂರ್ಣಚಂದ್ರ ತೇಜಸ್ವಿ" ಅಂತ ಉತ್ತರ ಕೊಟ್ರಂತೆ. ತಮಾಷೆ ಅನ್ಸಿದ್ರೂ ಈ ಉತ್ತರ ಒಪ್ಪಬಹುದಾದ್ದೇ; ಹಾಗಂತ ಎಲ್ಲ ತೇಜಸ್ವಿ ಅಭಿಮಾನಿಗಳಿಗೂ ಅನ್ನಿಸಿರುತ್ತದೆ.
ನಾನು ಓದಿದ ಮೊದಲ ತೇಜಸ್ವಿ ಕೃತಿ ’ಪರಿಸರದ ಕತೆ’, ಅದೂ ತುಂಬಾ ಹಿಂದೆ, ಪ್ರೈಮರಿ ಸ್ಕೂಲಿನಲ್ಲಿದ್ದಾಗ. ಆದರೂ ಸುಸ್ಮಿತ ಮತ್ತು ಹಕ್ಕಿಮರಿ, ಕಿವಿ, ಮಾನೀಟರ್, ಶ್ರೀರಾಮ್.. ಎಲ್ಲಾ ನಿನ್ನೆ ತಾನೇ ಪರಿಚಯವಾದವ್ರ ಹಾಗೆ ನೆನಪಿನಲ್ಲಿ ಉಳಿದಿದ್ದಾರೆ. ಮುಂದೆ ಒಂದೊಂದಾಗಿ ಅವರ ಎಲ್ಲಾ ಪುಸ್ತಕಗಳನ್ನು ಓದುತ್ತಾ ಹೋದಹಾಗೆ ತೇಜಸ್ವಿ ಒಂದು ಹೊಸಾ ಲೋಕವನ್ನೆ ನನ್ನ ಮುಂದೆ ತೆರೆದಿಟ್ಟಿದ್ದರು. ಪರಿಸರ, ಪ್ರಕೃತಿ, ಮತ್ತು ಕನ್ನಡ ಓದು ಇಷ್ಟವಾಗುವ ಎಲ್ಲರಿಗೂ ತೇಜಸ್ವಿ ಇಷ್ಟವಾಗಿಯೇ ಇರುತ್ತಾರೆ.
ತೇಜಸ್ವಿ ತಮ್ಮ ಬರಹಗಳಷ್ಟೇ interesting ಮನುಷ್ಯ. ನಿನ್ನೆ ಪತ್ರಿಕೆಯೊಂದರ ಪುರವಣಿ ಲೇಖನದಲ್ಲಿ ಒಬ್ಬರು ಬರೆದಿದ್ದರು, ಅವರು ತೇಜಸ್ವಿಯವರನ್ನು ಭೇಟಿ ಮಾಡಿದಾಗ ’ಏನು ಬರೆಯುತ್ತಿದ್ದೀರಿ?’ ಅಂತ ಕೇಳಿದರಂತೆ. ಅದಕ್ಕೆ ತೇಜಸ್ವಿ ’ಯಾವಾಗಲೂ ಯಾಕಯ್ಯಾ ಬರೀತಾ ಇರ್ಬೇಕು?’ ಅಂತ ಮರುಪ್ರಶ್ನೆ ಹಾಕಿದ್ರಂತೆ. He lived by his own rules.
1 comment:
ತೇಜಸ್ವಿ - ಸರಾಗವಾಗಿ ಹರಿದು ಹೋಗಬಹುದಾಗಿದ್ದ ನದಿಯೊಂದು, ಕಾಡಿನ ವಿಸ್ಮಯ ಹುಡುಕುತ್ತಾ ಹೋಗಿ, ಬಂಡೆಗಲ್ಗಳ ಕೊರೆದು, ಜಗದ ಅಚ್ಚರಿಗಳನೆಲ್ಲ ಮುತ್ತು ಹನಿಗಳಾಗಿ ಸಿಡಿಸಿ, ಹನಿಗಳಲ್ಲಿ ಹಗುರಾಗಿಯೂ, ಒಟ್ಟು ಧಾರೆಯಲ್ಲಿ ಅಗಾಧವಾಗಿಯೂ ಕಾಣಿಸುವ ಜಲಪಾತದಂತಹ ಚೇತನ. - ಅವರನ್ನು ಕುವೆಂಪು ಅವರ ಕೃತಿ ಎಂದು ಭಾವಿಸುವ ಅಭಿಪ್ರಾಯವೇ ಸರಿಯಲ್ಲ ಅನ್ನಿಸುತ್ತದೆ. ಅವರು ಕುವೆಂಪು ರಸ ಸಿದ್ದ್ದಿಯನ್ನು ಉಂಡು ಬೆಳೆದರೂ, ಅವರ ಅಭಿವ್ಯಕ್ತಿಯೇ ಬೇರೆ, ಭಿನ್ನ ಸ್ವತಂತ್ರ.
ನಾನು ಅವರನ್ನ ತುಂಬ ಪ್ರೀತಿಸುತ್ತೇನೆ. ಅವರ ಬರಹ ನುಡಿಗಳಿಗಿಂತಾ ಹೆಚ್ಚಾಗಿ ಅವರ ಕೆಲಸ್, ಬದುಕು, ನಡವಳಿಕೆಗಾಗಿ.. ತಮ್ಮನ್ನ ಅಪ್ಪನ ಜತೆ ಹೋಲಿಸುವುದಾಗಲಿ, ಅದರ ಆಧಾರದ ಮೇಲೆ ಬದುಕುವುದಾಗಲೀ ಅವರು ಸದಾ ದೂರವಿಟ್ಟ ವಿಷಯ.
Post a Comment