Saturday, October 14, 2006

ಓದುವ ಸುಖ, ಮತ್ತು ಬರೆಯುವ ಕಷ್ಟ

ನಾನು ಯಾವಾಗ್ಲೂ ಅಂದ್ಕೊಳ್ಳೋದು ಈ ಬರೆಯೋರೆಲ್ಲ ಹೇಗೆ ಬರೀತಾರೆ ಅಂತ!! ನಾಲ್ಕು ವರ್ಷದಿಂದ ಪ್ರತೀ ವಾರ ತಪ್ಪದೇ ವಿಚಿತ್ರಾನ್ನ ಬರೆಯೋ ಶ್ರೀವತ್ಸ ಜೋಶಿ, ಸಾವಿರ ಪುಟಗಳ ಕಾದಂಬರಿ ಬರಿಯೋ SLB.. ಇವ್ರಿಗೆಲ್ಲಾ ಬೇಜಾರು, ಸೋಮಾರಿತನ ಒಂದೂ ಇಲ್ವಾ? ನನ್ಗಂತೂ ತಿಂಗಳಿಗೊಂದು ಸಲ ಬ್ಲಾಗ್ ನಲ್ಲಿ ನಾಲ್ಕು ಸಾಲು ಕುಟ್ಟೋದೇ ಕಷ್ಟ. ಆದ್ರೆ ನಾನು ಹೋದ ಸಲ ಬ್ಲಾಗ್ update ಮಾಡಿದ್ಮೇಲೆ at least 15 ಪುಸ್ತಕ ಓದಿರ್ಬೋದು, ಲೆಕ್ಕ ಇಟ್ಕೊಂಡಿಲ್ಲ.. ಬರೆಯೋ ಕಷ್ಟ ಯಾರಿಗ್ಬೇಕು ಓದುವ ಸುಖ ಇರುವಾಗ!! ಎಲ್ರೂ ಬರೀತಾ ಇದ್ರೆ ಅದನ್ನೆಲ್ಲಾ ಓದೋರು ಬೇಕಲ್ಲ?

ಇತ್ತೀಚೆಗೆ ಓದಿದ್ದು:

ಸಾರ್ಥ: ಭೈರಪ್ಪನವರ ಈ latest but one ಕಾದಂಬರಿಗೋಸ್ಕರ ಇಡೀ ಬೆಂಗ್ಳೂರು ಸುತ್ತಿದ್ರೂ no luck!! ಎಲ್ಲಿ ಕೇಳಿದ್ರೂ out of print. ಆಮೇಲೆ ಈ ಪುಸ್ತಕ ಅಮೇರಿಕಾದಿಂದ ಇರಾನಿಗೆ ಹಾರಿಬಂತು ಸತೀಶ್ ದಯೆಯಿಂದ.
typical SLB subject. strong female character Chandrika, ತನಗೆ ಏನು ಬೇಕು ಅಂತಾನೇ ಗೊತ್ತಿಲ್ದೊ ಇರೋ , ಸಂನ್ಯಾಸದ ಕಡೆ ಹೋಗಿ ಆಮೇಲೆ ಕೊನಯಲ್ಲಿ ಸಂಸಾರಿಯಾಗುವ ನಾಗಭಟ್ಟ. ಸಾರ್ಥ ಅಂದ್ರೆ ಏನು ಅಂತ ಪುಸ್ತಕ ಓದುವ ಮೊದ್ಲು ಗೊತ್ತಿರ್ಲಿಲ್ಲ, ಅದನ್ನ ಬದುಕಿಗೆ ತುಂಬಾ ಚೆನ್ನಾಗಿ ಪ್ರತಿಮೆಯಾಗಿ use ಮಾಡಿದ್ದಾರೆ. ಮಂಡನಮಿಶ್ರ ಮತ್ತು ಶಂಕರಾಚಾರ್ಯರ ಸಂವಾದ ಚೆನ್ನಾಗಿದೆ.

ವಸುಧೇಂದ್ರರ ಕಥಾಸಂಕಲನಗಳು ಮತ್ತು ಪ್ರಬಂಧಗಳು: ವಸುಧೇಂದ್ರರ ಬರಹಗಳನ್ನು ದಟ್ಸ್ ಕನ್ನಡ.ಕಾಂನಲ್ಲಿ ಓದಿದಾಗ್ಲೇ ಇಷ್ಟ ಆಗಿತ್ತು. ಈವಾಗಂತೂ ನಾನು great fan!! ಯುಗಾದಿ, ಕೋತಿಗಳು ಸಾರ್ ಕೋತಿಗಳು, ನಮ್ಮಮ್ಮ ಅಂದ್ರೆ ನಂಗಿಷ್ಟ, ಮಿಥುನ (ತೆಲುಗು ಕತೆಗಳ ಅನುವಾದ) ಓದಿದೆ. ತುಂಬಾ touching, down-to-earth style. ಕನ್ನಡದಲ್ಲೇ ಹೇಳ್ಬೇಕಂದ್ರೆ ತುಂಬಾ ಆಪ್ತವಾಗುವ ನಿರೂಪಣೆ, ಓದ್ತಾ ಇದ್ರೆ ನಮ್ಮದೇ, ನಮ್ಮ ಊರಲ್ಲಿ ನಡೆದದ್ದೇ ಕತೆಯೇನೋ ಅನ್ನುವ feeling. ರಾಜ್ ಕುಮಾರ್ ಸತ್ತಾಗ ಅವ್ರ ಬಗ್ಗೆ ಸಾವಿರದೆಂಟು ಲೇಖನ ಓದಿದ್ದೆ, ಅದ್ರಲ್ಲಿ ತುಂಬ ಇಷ್ಟ ಆದದ್ದು ವಸುಧೇಂದ್ರರ ಈ ಲೀಖನ. ಈ ಲೇಖನದಲ್ಲಿರುವಷ್ಟು force, ಭಾವನಾತೀವ್ರತೆ ಬೇರೆ ಯಾರ ಬರಹದಲ್ಲೂ ಇರ್ಲಿಲ್ಲ.

'ಮನೀಷೆ', 'ಚೇಳು' are in yet-to-read list. i can't wait to read them.

ಎ ಎನ್ ಮೂರ್ತಿರಾವ್: ANMR is one my all-time favorites('ದೇವರು' ಓದಿದ ಕಾಲದಿಂದ). ಇತ್ತೀಚೆಗೆ ಓದಿದ್ದು:

ಚಿತ್ರಗಳು-ಪತ್ರಗಳು - ಇದು one-of-it's kind book. ಈ ಪುಸ್ತಕದ ಮೊದಲ ಭಾಗದಲ್ಲಿ ಅವರ ಜೀವನದಲ್ಲಿ ಬಂದ ಕೆಲವು important ವ್ಯಕ್ತಿಗಳ ಪರಿಚಯ. ಎರಡನೇ ಭಾಗದಲ್ಲಿ ಅವರು ಬರೆದ ಪತ್ರಗಳ collection - ಮುಖ್ಯವಾಗಿ ಅವರು ತಮ್ಮ ಸ್ನೇಹಿತ ತೀ.ನಂ.ಶ್ರೀಕಂಠಯ್ಯನವರಿಗೆ ಮತ್ತು ಅವರ ಮಕ್ಕಳಿಗೆ ಬರೆದ ಪತ್ರಗಳು. ಇದ್ರಲ್ಲಿ ನನಗೆ ಇಷ್ಟ ಆದದ್ದು ANMR ತೀ.ನಂ.ಶ್ರೀಗೆ ಬರೆದ ಪತ್ರಗಳು - ಇಬ್ಬರು ಸ್ನೇಹಿತರಲ್ಲಿ ಬರಬಹುದಾದ ಎಲ್ಲ emotionಗಳು ಇಲ್ಲಿವೆ - ಒಬ್ಬರು ಬೇಜಾರು ಮಾಡಿಕೊಳ್ಳುವುದು, ಅವರಿಗೆ ಬೇಸರ ಆಯ್ತಲ್ಲ ಅಂತ ಇನ್ನೊಬ್ರು ತುಂಬ ನೊಂದುಕೊಳ್ಳೋದು, ಹಾಸ್ಯ, ಕಾಲೆಳೆಯುವಿಕೆ, ಹುಸಿಸಿಟ್ಟು, ಎಲ್ಲಾ... the reader can feel the depth of their friendship.

ಅಪರವಯಸ್ಕನ ಅಮೇರಿಕಾಯಾತ್ರೆ - ಇದು ಪ್ರವಾಸಕಥನ ಅಲ್ಲ ಅಂತ ಅವರೇ ಹೇಳಿಕೊಂಡಿದ್ದಾರೆ. ಪ್ರವಾಸವಿವರದ ಜೊತೆಗೆ ತನ್ನ ದಿನಚರಿಯಲ್ಲಿ ನಡೆದ ಬೇರೆ ವಿಷಯಗಳು, ಏನನ್ನೋ ನೋಡಿ-ಕೇಳಿದಾಗ ಅವರಿಗೆ ನೆನಪಿಗೆ ಬಂದ ಬೇರೆ ಏನೋ ಘಟನೆಗಳು, ಎಲ್ಲವನ್ನೂ ಬರೆದಿದ್ದಾರೆ.

ಸಮಗ್ರ ಲಲಿತಪ್ರಬಂಧಗಳು - ಇದನ್ನು ಇನ್ನೂ ಓದಿ ಮುಗ್ಸಿಲ್ಲ. so far so good.

ANMR ಶೈಲಿ ತುಂಬಾ polite. 'ದೇವರು'ದಲ್ಲಿ ದೇವರಿಲ್ಲ ಅಂತ ಬರೆದಾಗ್ಲೂ ಅಲ್ಲಿ ನಾನು ಹೇಳಿದ್ಮೇಲೆ ಮುಗೀತು, ದೇವ್ರು ಇಲ್ವೇ ಇಲ್ಲ ಅನ್ನುವ authority ಇಲ್ಲ, ನನ್ಗೆ ಹೀಗೆ ಅನ್ನಿಸುತ್ತೆ ಅನ್ನುವ ಅಭಿಪ್ರಾಯ ಅಷ್ಟೆ. AMNR ದೊಡ್ಡ ವಿದ್ವಾಂಸರು, Enlgish literature, Bible ಬಗ್ಗೆ ಅವ್ರಷ್ಟು ಯಾರಿಗೂ ಪಾಂಡಿತ್ಯ ಇರಲಿಕ್ಕಿಲ್ಲ. ಆದ್ರೂ common person ತರ ಬರೆದಿದ್ದಾರೆ. ಮತ್ತೆ ಅವರ ಬರಹಗಳು ತುಂಬ lively - ತಮ್ಮನ್ನು ತಾವು ಸೋಮಾರಿ ಅಂತ ಬೈದುಕೊಳ್ಳೋದು, ತಮಾಷೆ ಮಾಡಿಕೊಳ್ಳುವುದು ಎಲ್ಲ ಪುಸ್ತಕಗಳಲ್ಲೂ ಉಂಟು.

that's all for now. :-)

16 comments:

Anonymous said...

ಓಹ್! ನೀವು ಕನ್ನಡದಲ್ಲಿ ಬರೆಯಲು ಆರಂಭಿಸಿದಂತಿದೆಯಲ್ಲಾ.

ಹೆಚ್ಚೇನೂ ಇಲ್ಲ, you are alomost there - ಮೊದಲು ಓದೋ ಕಾಯಕ ಆಮೇಲೆ ಬರೆಯೋದು, ಎಲ್ರೂ ಮಾಡೋದೂ ಅಷ್ಟೇ.

ಮೊನ್ನೆ ಸಾಹಿತ್ಯದಲ್ಲಿ ಈ ವರ್ಷದ ನೊಬೆಲ್ ಪ್ರಶಸ್ತಿಯನ್ನು ಪಡೆದ ಅರ್ಹಾನ್ ಪಾಮುಖ್ ಸಂದರ್ಶನವನ್ನು ಕೇಳಿದೆ, ಆತ ಕಳೆದ ಮೂವತ್ತು ವರ್ಷಗಳಿಂದ ದಿನವೊಂದಕ್ಕೆ ಹತ್ತು ಘಂಟೆಗಳನ್ನು ಎಡಬಿಡದೆ ವ್ಯಯಿಸುತ್ತಾರಂತೆ! ಹಾಗೇ ಉಳಿದ ಅತಿರಥ-ಮಹಾರಥರೂ, ಆಸ್ತಾನ ಬರಹಗಾರರು ಮಾಡುತ್ತಿರಬಹುದು.

ನೀವು ಓದಿದ್ದನ್ನು ಎಲ್ಲರೊಡನೆ ಹಂಚಿಕೊಂಡಿದ್ದು ಸ್ವಾಗತಾರ್ಹ, ನಿಮ್ಮ ಓದುವಿಕೆ ಹಾಗೂ ಬರವಣಿಗೆ ಹೀಗೆ ಮುಂದುವರೆಯಲಿ.

Anonymous said...

If you cud hv also written in English, I would have got the benefit of knowing a 'wonderful work' in kannada!

Shrilatha Puthi said...

Dear Anonymous,

I'll take ur advice. my kannada writing was on public demand :-) and i thought others won't be interested in kannada books. if u r ready to listen, why won't i be ready to tell...

Anonymous said...

ಶ್ರೀಲತಾ ಬ್ಲಾಗಿನಲ್ಲಿ ಕನ್ನಡ ನೋಡಿ ಖುಷಿ ಆಯಿತು!
ನನಗೂ ಅಷ್ಟೇ ಓದೋದೇ ಸುಖ! ಬರೆಯೋದು ಕಷ್ಟ :)

ಅಂದ ಹಾಗೆ, ಅಂತರಂಗದ ಸತೀಶ್, ಪುಸ್ತಕ ರಫ್ತು ವ್ಯವಹಾರವನ್ನು ಅಮೆರಿಕಾದಿಂದ ಇರಾನ್‍ಗೂ ಮುಂದುವರೆಸಿದಾರೆ ಅಂತ ಆಯ್ತು :)

Shrilatha Puthi said...

ಹೌದು, ಓದುವುದು ಸುಖ. ನಿಮ್ಮ ಕಳೆಕಳೆಯಾದ, ಹುಲುಹುಲುಸಾದ ತುಳಸೀವನದಲ್ಲಿ ವಿಹರಿಸುವುದು ನಮಗೆಲ್ಲಾ ಇನ್ನೂ ಸುಖ..

Anonymous said...

ಅಬ್ಬಾ.... ಇರಾಣುವಿನ ಅಸ್ತ್ರ ವಿರುವಲ್ಲೂ ಕನ್ನಡವನ್ನು ಸೊಂಪಾಗಿ ಬೆಳೆಸಿದ್ದೀರಲ್ಲಾ... ಚೆನ್ನಾಗಿದೆ.

ಕಂಡಾಬಟ್ಟೆ ಕುಸಿಯಾನ್!

Anonymous said...

ಶ್ರೀಲತಾ, ಇಂಚನೇ ಕನ್ನಡೊಂಟೇ ಬರೆಲೆ, ಓದೆರೆ ಖುಷಿಯಾಪುಣು.

ದೀಪಾವಳಿ ಪರ್ಬೊಂಕು ಶುಭಾಶಯೊ. ಪಟಾಕಿ ಪುಡೋತ್ತರೋ ಎಂಚ? ದೋಸೆ-ಬಜಿಲ್ ಆನಾ? ಎಂಕ್'ಲಾ ಇಜಿಲೆ, ಪುರುಸೋತ್ತ್'ಡ್ ಬರ್ಪೆ.

Take care. bye bye.
-Jyothi.

Anonymous said...

bariyodu bAri kashtare!! oduva sukha maatra nanagirali..neevu hege kasTa paTTu barita iri..:)

Shrilatha Puthi said...

@ ಜ್ಯೋತಿ: ಇರಾನ್ಡ್ ದೋಸೆ-ಬಜಿಲ್ ಇದ್ದಿ, ಚಿಕನ್ ಕಬಾಬ್ ಮಾತ್ರ ಸಿಕ್ಕುಣ. :-( ನಿಂಕ್ಳೇ ಕಡಬುಡ್ಲೆ..

@ ಮಹಾಂತೇಶ್: ನಾನೇ ಸೋಮಾರಿ ಅಂದ್ರೆ ನೀವು ನನ್ಗಿಂತಲೂ ಹೆಚ್ಚು.. ನನ್ಗೇ ಕೆಲ್ಸ ಕೊಟ್ಟು ಬಿಟ್ರಲ್ಲಾ!!

Anonymous said...

ಓಯ್, ಎಡ್ಡೆ ಪಂಡರ್! ಮುಳ್ಪತ್ತ್ ದೋಸೆ-ಬಜಿಲ್ ಪಾರ್ಸೆಲ್ ಅಂತ್‍ಂಡ ಇರಾನ್‍ಗ್ ಮುಟ್‍ನಗ ಅವು ಪೂರಾ ಪೊಸ-ರುಚಿ ಆತಿಪ್ಪು....

ಬೆತ್ತ್ ಓಳ್ ಮಂತ hiking ಪೋಯರ್?

"ಓದು ಬರಹದ ಶತ್ರು" ಪಂಡ್‍ತ್ ಹಿರಿಯೆರ್ ತೀ.ನಂ.ಶ್ರೀ ಪಂಡ್ತೇರ್ ಕರೆ. ನಿಕ್ಳೆ ಕಥೆಲಾ ಅಂಚನೇ ಆನ್. ಎನ್ನೊ ಕಥೆಲಾ ಅವ್ವೇ, ಬುಡಿ.

OK, take care. bye.

Shrilatha Puthi said...

ಪೊಸ ರುಚಿ ಆಂಡ ಪೊಸ ರುಚಿ, ಸ್ವಯಂಪಾಕ ತಿಂತ್ ತಿಂತ್ ಬೇಜಾರ್ ಆತ್ನ್.

hiking ಎಲ್ಲೆ ಪೋವೊಂತುಳ್ಳೆ.

Anonymous said...

oh! bareyodu kasta anta isttudda baredidira :) nimma blog oduva sukha chennagittu. barita iri.

Jagali bhaagavata said...

ಶ್ರೀಲತಾ, ನಿಮ್ಮ ಕನ್ನಡ ಸಶಕ್ತವಾಗಿದೆ. ಕಷ್ಟ ಆದ್ರೂ ನಮಗೋಸ್ಕರ ಕನ್ನಡದಲ್ಲಿ ಬರೀತಾ ಇರಿ:-) ತುಂಬ ಚೆನ್ನಾಗಿ ಬರೀತೀರ.

ಮೂರ್ತಿರಾಯರ 'ಸಂಜೆಗಣ್ಣಿನ ಹಿನ್ನೋಟ' ಓದಿದೀರ? ತುಂಬ ಇಷ್ಟ ಆಯ್ತು ನನಗೆ. ಮೂರ್ತಿರಾಯರಿಗೆ ನೂರು ವರ್ಷ ತುಂಬಿದಾಗ ಕಾಲೇಜಿಗೆ ಕರೆಸಿಕೊಂಡಿದ್ವಿ. ಸಜ್ಜನ, ಸರಳ ಜೀವಿ. ಮೂರ್ತಿರಾಯರಿಗೆ ಮತ್ತೆ ಕೋ.ಲ.ಕಾರಂತರಿಗೆ 'ದೇವರ' ಕುರಿತು ಒಂದೇ ರೀತಿ ನಿಲುವಿತ್ತು. ಅವರು ದೇವರನ್ನ ನಂಬಲ್ಲ, ಆದ್ರೆ ಆಸ್ತಿಕ ಹೆಂಡತಿಯ ಮನಸ್ಸು ನೋಯಿಸಲ್ಲ.

Shrilatha Puthi said...

Bhagavatare,

'SanjegaNNina hinnOTa' is one of my favorites as well. I've read it few times. Murthy Rao is one my all-time favorite writers, and as you said he comes across as simple, yet great human being!!

ps: i'm having some problems in blogger, that's why i'm not able to blog frequently. hope they sort it out soon.

Jagali bhaagavata said...

ಆಯ್ತು. ನೀವು ಆದಷ್ಟು ಬೇಗ ಬ್ಲಾಗ್ ಬರೆಯುವ ಹಾಗಾಗ್ಲಿ. ನಾವು ಕಾಯ್ತಾ ಇರ್ತೀವಿ:-)

Jagali bhaagavata said...

I provided a link to your blog in mine. Would you mind?